ಶ್ರೀಸಂಕೇಶ್ವರ ಫ಼ಿಲಂಸ್ ಲಾಂಛನದಲ್ಲಿ ಅಮರಚಂದ್ ಜೈನ್, ವಿಜಯ್ ಸುರಾನಾ, ಮಂಗೀಲಾಲ್ ಜೈನ್ ಮತ್ತು ರಮೇಶ್ ರವರು ನಿರ್ಮಿಸುತ್ತಿರುವ ‘ಶಾಕ್’ ಚಿತ್ರದ ಚಿತ್ರೀಕರಣ ಅರಸಿಕೆರೆಯಲ್ಲಿ ಆರಂಭವಾಗಿದೆ.
ರಮೇಶ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರವನ್ನು ಹ.ಸೂ ರಾಜಾಶೇಖರ್ ನಿರ್ದೇಶಿಸುತ್ತಿದ್ದಾರೆ. ಸುಮಾಗುವಾ ನಾಯಕಿಯಾಗಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನೀನಾಸಂ ಅಶ್ವತ್ ಇದ್ದಾರೆ.
ವಿಭಿನ್ನ ಕಥೆಯನ್ನೊಳಗೊಂಡ ಈ ಚಿತ್ರದ ಚಿತ್ರೀಕರಣ ಒಂದೇ ಮನೆಯಲ್ಲಿ ನಡೆಯಲಿದೆ. ಚಿತ್ರಕ್ಕೆ ಚಿತ್ರಕಥೆ, ಹಾಗೂ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ. ನಿರಂಜನಬಾಬು ಛಾಯಾಗ್ರಹಣ, ಶ್ರೀನಿವಾಸ್ರೆಡ್ಡಿ ಸಂಕಲನ, ಬಾಬುಖಾನ್ ಕಲಾನಿರ್ದೇಶನ ಹಾಗೂ ಜಾನಿ ಅವರ ಸಾಹಸ ನಿರ್ದೇಶನವಿರುವ ‘ಶಾಕ್’ ಚಿತ್ರದಲ್ಲಿ ನಾಯಕ ರಮೇಶ್ ಸೈಕೊ ಪಾತ್ರ ನಿರ್ವಹಿಸುತ್ತಿದ್ದಾರೆ.